Hot Posts

6/recent/ticker-posts

ಬೆಳಗಾವಿ : BSC ಮಾಲ್‌ನಲ್ಲಿ ಗ್ರಾಹಕರಿಗೆ ಹೊಸ ಕೊಡುಗೆಗಳು.

 

ಖರೀದಿಗೆ ಶೇ.20 ರಿಯಾಯಿತಿ: ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ

ಬೆಳಗಾವಿ: ಶ್ರಾವಣ ಮಾಸ ಹಾಗೂ ಮುಂಬರುವ ವಿವಿಧ ಹಬ್ಬಗಳ ನಿಮಿತ್ತ ಬಿಎಸ್‌ಸಿ ಮಾಲ್ ಗ್ರಾಹಕರಿಗಾಗಿ ಡಬಲ್ ಡಿಸ್ಕೌಂಟ್ ಅಬ್ಬರ ಆರಂಭಿಸಿದೆ. ಭಾನುವಾರ 21ರಿಂದ ಈ ಯೋಜನೆ ಆರಂಭವಾಗಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಬಿಎಸ್‌ಸಿ ಮಾಲ್‌ನ ವ್ಯವಸ್ಥಾಪಕ ನಿರ್ದೇಶಕ ಬಿ. ಯು. ಚಂದ್ರಶೇಖರ್ ಮಾಡಿದ್ದಾರೆ. ಬಿ. ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಟಿಳಕವಾಡಿ-ಬೆಳಗಾವಿ ಮಾಲ್ ಗೆ ಗ್ರಾಹಕರು ಇಲ್ಲಿಯವರೆಗೂ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ನಮ್ಮ ಎಲ್ಲಾ ಬಟ್ಟೆಗಳು ಎಲ್ಲಕ್ಕಿಂತ ಅಗ್ಗವಾಗಿವೆ. ಆದ್ದರಿಂದಲೇ ಗ್ರಾಹಕರು ನಮ್ಮ ಮೇಲೆ ವಿಶ್ವಾಸವಿಟ್ಟು ಇಂದಿಗೂ ಸಹಕರಿಸಿದ್ದಾರೆ. ಬೆಳಗಾವಿ ಅಲ್ಲದೆ ಗೋವಾ, ಮಹಾರಾಷ್ಟ್ರದ ಗ್ರಾಹಕರು ಕೂಡ ನಮಗೆ ಸ್ಪಂದಿಸಿದ್ದಾರೆ. 2022 ರಲ್ಲಿ ಪ್ರಾರಂಭವಾದ ಈ ಮಾಲ್ ಮೂರನೇ ವರ್ಷಕ್ಕೆ ಕಾಲಿಡುತ್ತಿದೆ.

ಇಲ್ಲಿಯವರೆಗೆ ನಾವು BSC ಮಾಲ್‌ನಲ್ಲಿ ಗ್ರಾಹಕರಿಗೆ ಪ್ರತಿ ಖರೀದಿಯ ಮೇಲೆ 10 ಪ್ರತಿಶತ ರಿಯಾಯಿತಿಯನ್ನು ನೀಡಿದ್ದೇವೆ. ಆದರೆ, ಈಗ ಶೇ.20ರಷ್ಟು ನೀಡಲಾಗುವುದು. ಅತ್ಯುತ್ತಮ ಗುಣಮಟ್ಟದ ಬಟ್ಟೆಗಳ ಜೊತೆಗೆ ಅತ್ಯಂತ ಕೈಗೆಟಕುವ ಬೆಲೆಯಲ್ಲಿ ಈ ಬಟ್ಟೆಗಳನ್ನು ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಿದ್ದೇವೆ. ಮುಖ್ಯವಾಗಿ, ತಾಜಾ ಮತ್ತು ಹೊಸ ಸ್ಟಾಕ್ ಮೇಲೆ ಈ ರಿಯಾಯಿತಿ ನೀಡಲಾಗಿದೆ ಎಂದು ಅವರು ಈ ಸಮಯದಲ್ಲಿ ಹೇಳಿದರು. ಬೆಳಗಾವಿ ಜಿಲ್ಲೆಯ ಏಕೈಕ ಮಾಲ್ ಇದಾಗಿದ್ದು, ಗ್ರಾಹಕರಿಗೆ ಒಂದೇ ಸ್ಥಳದಲ್ಲಿ ವಿವಿಧ ರೀತಿಯ ಮತ್ತು ಗುಣಮಟ್ಟದ ಬಟ್ಟೆಗಳನ್ನು ನೀಡಲಾಗುತ್ತದೆ. ಗ್ರಾಹಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಆರಂಭದಲ್ಲಿ ವ್ಯವಸ್ಥಾಪಕ ಅಮ್ಜದ್ ಜಮಾದಾರ ಸ್ವಾಗತಿಸಿ ಉದ್ದೇಶವನ್ನು ವಿವರಿಸಿದರು. ಈರಣ್ಣ ಶಿವಶೆಟ್ಟಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು