ಸ್ಫೋಟದ ರಭಸಕ್ಕೆ ಪಾತ್ರೆಯ ಶೆಡ್ ಕೂಡ ಸಂಪೂರ್ಣ ಹಾರಿ ಹೋಗಿದೆ. ಸ್ಥಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ನಾಗಪಂಚಮಿಯಂದು ಪಾಮಲದಿನ್ನಿಯಲ್ಲಿ ಪಟಾಕಿ ಸಿಡಿಸುವ ಸಂಪ್ರದಾಯವಿದೆ. ಇದಕ್ಕಾಗಿ ಮದ್ಯದ ಪಟಾಕಿ ಸಿದ್ಧಪಡಿಸುತ್ತಿದ್ದಾಗ ಏಕಾಏಕಿ ಸ್ಫೋಟಗೊಂಡು ಮಲ್ಲಪ್ಪ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಒಲೆ ಹೊತ್ತಿ ಉರಿದ ಪರಿಣಾಮ ಘಟನೆ ನಡೆದಿದೆ ಎಂಬುದು ಪ್ರಾಥಮಿಕ ಮಾಹಿತಿ. ಘಟನೆ ಬಳಿಕ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಶೆಡ್‌ನಲ್ಲಿದ್ದ ಬೆಂಕಿ ನಂದಿಸಿದ ಬಳಿಕ ಶೆಡ್‌ಗೆ ನುಗ್ಗಿದ ಯೋಧರು ಮಲ್ಲಪ್ಪ ಅವರ ಸುಟ್ಟ ಶವ ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ಜನ ಜಮಾಯಿಸಿದ್ದರು.
0 ಕಾಮೆಂಟ್‌ಗಳು