Hot Posts

6/recent/ticker-posts

ಬೆಳಗಾವಿ: ಒಬ್ಬನ ಮೇಲೆ ಚಾಕು ದಾಳಿ: ಬಿಎಸ್‌ಎಫ್ ಯೋಧನ ಬಂಧನ.

 

ಬೆಳಗಾವಿ: ಹೋಟೆಲ್ ನಲ್ಲಿ ಬಿಲ್ ಪಾವತಿ ವಿಚಾರವಾಗಿ ನಡೆದ ಜಗಳದಲ್ಲಿ ಯುವಕನೊಬ್ಬನಿಗೆ ಬಿಎಸ್ ಎಫ್ ಜವಾನ ಚಾಕುವಿನಿಂದ ಇರಿದಿದ್ದು, ಆರೋಪಿಯನ್ನು ಭಾನುವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.

 ಬೆಳಗಾವಿಯ ಸದಾಶಿವ ನಗರದ ಆಯಿ ಹೋಟೆಲ್ ನಲ್ಲಿ ಗಂಗವಾಡಿ ಯುವಕರು ಊಟಕ್ಕೆ ಬಂದಿದ್ದರು. ಊಟ ಮುಗಿಸಿ ಮಾಲೀಕರಿಗೆ ಹಣ ಕೊಡುವ ವಿಚಾರದಲ್ಲಿ ಜಗಳ ನಡೆದಿದೆ. ಅಲ್ಲಿ ಊಟ ಮಾಡುತ್ತಿದ್ದ ಬಿಎಸ್‌ಎಫ್ ಜವಾನನೊಬ್ಬ ಪರಾಶರಾಮ ರಾಮಗೊಂಡನವರ ಜತೆಗಿನ ವಿವಾದ ಬಗೆಹರಿಸಲು ಮುಂದಾದಾಗ ಗಂಗವಾಡಿಯ ಅಲ್ತಾಫ್ ಚೌಗುಲೆ ಜತೆ ಜವಾನ ವಾಗ್ವಾದಕ್ಕಿಳಿದಿದ್ದಾನೆ. ಈ ಜಗಳದ ವೇಳೆ ಬಿಎಸ್‌ಎಫ್ ಜವಾನ ಅಲ್ತಾಫ್‌ಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ.

 ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಿಎಸ್‌ಎಫ್ ಜವಾನನನ್ನು ಪೊಲೀಸರು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು