Hot Posts

6/recent/ticker-posts

ಬೆಳಗಾವಿ: 35 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ.

 

ಬೆಳಗಾವಿ: ಬೀಗ ಹಾಕಿದ್ದ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಬೋರ್ಡ್ ನಲ್ಲಿದ್ದ 43 ತೊಲ ಚಿನ್ನ, 16 ತೊಲ ಬೆಳ್ಳಿ ಆಭರಣ ಹಾಗೂ ₹35 ಲಕ್ಷ ನಗದು ದೋಚಿ ಪರಾರಿಯಾಗಿರುವ ಘಟನೆ ಕೊಕ್ತನೂರಿನಲ್ಲಿ (ಅಥಣಿ) ನಡೆದಿದೆ. ಅಥಣಿ ನಗರ ಕಳೆದ 8 ದಿನಗಳಲ್ಲಿ ಕೊಕ್ತನೂರಿನಲ್ಲಿ ನಡೆದ ಭಾರಿ ಕಳ್ಳತನ ನಡೆದಿದ್ದು, ಈ ಭಾಗದಲ್ಲಿ ಆತಂಕ ಮೂಡಿಸಿದೆ. ನೂರ್ ಅಹ್ಮದ್ ಕಾವ್ರೆ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.

ಎಂಟು ದಿನಗಳ ಹಿಂದೆ ಅಥಣಿ ನಗರದಲ್ಲಿ ಹತ್ತು ಮನೆಗಳಿಗೆ ನುಗ್ಗಿ ಚಿನ್ನಾಭರಣ, ನಗದು, ಲ್ಯಾಪ್ ಟಾಪ್ ದೋಚಿರುವ ಘಟನೆ ನಡೆದಿದೆ. ಈ ಘಟನೆ ತಾಜಾ ಆಗಿರುವಾಗಲೇ ಕೊಕ್ತನೂರಿನಲ್ಲಿ ಮನೆಗಳ್ಳತನ ನಡೆದಿದೆ. ಕಾವ್ರೆ ಅವರ ಮನೆಗೆ ಹೊರಗಿನಿಂದ ಬೀಗ ಹಾಕಿರುವುದನ್ನು ಕಂಡ ಕಳ್ಳರು ಬಾಗಿಲು ಕಡಿದು ಮನೆಗೆ ನುಗ್ಗಿದ್ದಾರೆ. ಮನೆಯ ಕಬೋರ್ಡ್ ನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ನಗದು ಹಣದೊಂದಿಗೆ ಕಳ್ಳರು ಪರಾರಿಯಾಗಿದ್ದಾರೆ. ಶನಿವಾರ ರಾತ್ರಿ ಕಾವ್ರೆ ಅವರ ಮನೆಯ ಬಳಿಯಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಮೂವರು ಯುವಕರು ಸೆರೆಯಾಗಿದ್ದಾರೆ.

ಸಿಸಿಟಿವಿ ದೃಶ್ಯಾವಳಿ ನೋಡಿದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಕುರಿತು ಏಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳಿ, ರವೀಂದ್ರ ನಾಯಕವಾಡೆ ಅವರ ಮಾರ್ಗದರ್ಶನದಲ್ಲಿ ಪಿಎಸ್ ಐ ಕುಮಾರ ಹಡಕರ, ಪಿಎಸ್ ಐ ರಾಕೇಶ ಬಗಳಿ, ಚಂದ್ರಶೇಖರ್ ನಾಗನೂರ ತನಿಖಾ ತಂಡಗಳನ್ನು ವಿವಿಧೆಡೆ ರವಾನಿಸಿದ್ದಾರೆ. ಕಳ್ಳರು ಇನ್ನೂ ಪತ್ತೆಯಾಗಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು