ಬೆಳಗಾವಿ: ದುಡಿಯುವ ಮಗನನ್ನು ಕಳೆದುಕೊಂಡು ಕಂಗಾಲಾಗಿದ್ದ ಕುಟುಂಬಕ್ಕೆ ಎಸ್‌ಡಬ್ಲ್ಯುಆರ್ ರೈಲ್ವೆ ವಿಭಾಗದ ಟಿಕೆಟ್ ಪರಿವೀಕ್ಷಕರು ಸಹಾಯ ಹಸ್ತ ಚಾಚಿದ್ದಾರೆ. ವಾಟ್ಸಾಪ್ ಗ್ರೂಪ್ ಮೂಲಕ ಹುಬ್ಬಳ್ಳಿ ಮತ್ತು ಮೈಸೂರು ವಿಭಾಗದ ನೌಕರರು ₹ 4 ಲಕ್ಷದ 50 ಸಾವಿರ ಸಹಾಯಧನ ಸಂಗ್ರಹಿಸಿ ‘ಆ’ ನಿರ್ಗತಿಕ ಕುಟುಂಬಕ್ಕೆ ಹಸ್ತಾಂತರಿಸಿದ್ದು, ರೈಲ್ವೆ ನೌಕರರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಎರಡು ತಿಂಗಳ ಹಿಂದೆ ಲೊಂಧಾ ಮತ್ತು ಖಾನಾಪುರದ ನಡುವೆ ಪ್ರಯಾಣಿಸುತ್ತಿದ್ದ ಉತ್ತರ ಪ್ರದೇಶದ ಝಾನ್ಸಿ ಮೂಲದ ರೈಲ್ವೆ ಉದ್ಯೋಗಿ ದೇವರ್ಷಿ ವರ್ಮಾ (ವಯಸ್ಸು 23) ಎಂಬುವವರ ಮೇಲೆ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಈ ದಾಳಿಯಲ್ಲಿ ದೇವರ್ಷಿ ಸಾವನ್ನಪ್ಪಿದ್ದಾನೆ. ಇದರಿಂದ ವರ್ಮಾ ಕುಟುಂಬ ನಿರ್ಗತಿಕವಾಗಿದೆ. ದೇವರ್ಷಿ ರೈಲ್ವೆಯಲ್ಲಿ ಗುತ್ತಿಗೆ ನೌಕರನಾಗಿದ್ದರಿಂದ ಕುಟುಂಬದ ಮೂಲ ಆಸರೆ ಇಲ್ಲವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಬೆಳಗಾವಿ ಟಿಕೆಟ್ ಪರಿವೀಕ್ಷಕ ಸುನೀಲ್ ಆಪ್ಟೇಕರ್ ಮತ್ತು ಅವರ ತಂಡ ಕುಟುಂಬಕ್ಕೆ ಸಹಾಯ ಮಾಡಲು ನಿರ್ಧರಿಸಿದೆ.
ರೈಲ್ವೆ ನೌಕರರ ವಾಟ್ಸಾಪ್ ಗ್ರೂಪ್‌ನಲ್ಲಿ ವರ್ಮಾ ಕುಟುಂಬಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಈ ಕರೆಗೆ ಸ್ಪಂದಿಸಿ ಹುಬ್ಬಳ್ಳಿ ಮತ್ತು ಮೈಸೂರು ಎರಡು ವಿಭಾಗಗಳಲ್ಲಿ ಮಾತ್ರ 4 ಲಕ್ಷ 50 ಸಾವಿರ ರೂ. ಬೆಂಗಳೂರು ವಿಭಾಗದಿಂದ ಇನ್ನೂ ಆರ್ಥಿಕ ನೆರವು ಬರಬೇಕಿದೆ. ಈ ಮೊತ್ತವನ್ನು ರೈಲ್ವೆಯ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಸತ್ಯ ಪ್ರಕಾಶ್ ಮತ್ತು ಹುಬ್ಬಳ್ಳಿ ವಿಭಾಗದ ಡಿಆರ್‌ಎಂ ಸಮ್ಮುಖದಲ್ಲಿ ದೇವರ್ಷಿ ವರ್ಮಾ ಅವರ ತಾಯಿಗೆ ನೀಡಲಾಯಿತು.
0 ಕಾಮೆಂಟ್‌ಗಳು