Hot Posts

6/recent/ticker-posts

ಬೆಳಗಾವಿ: 3 ಕಡೆ ಕಳ್ಳತನ, ಇಬ್ಬರ ಬಂಧನ.

 

ಬೆಳಗಾವಿ: ರಾಮಲಿಂಗ್ ಖಿಂದ ಗಲ್ಲಿ, ಭವಾನಿನಗರ ಮತ್ತು ಗಣೇಶಪುರ ಎಂಬ ಮೂರು ಕಡೆ ಮನೆಗಳಿಗೆ ಕನ್ನ ಹಾಕಿದ ಇಬ್ಬರನ್ನು ಬಂಧಿಸಿರುವ ಖಡೇಬಜಾರ್ ಪೊಲೀಸರು ಅವರಿಂದ ಸುಮಾರು ₹ 6 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅವರ ಹೆಸರು ಚೇತನ್ ಮಾರುತಿ ಶಿಂಧೆ (ವಯಸ್ಸು 26, ರೆ. ಗಣೇಶಪುರ, ಬೆಳಗಾವಿ) ಮತ್ತು ಕರಣ್ ಉತ್ತಮ್ ಮುಟ್ಗೇಕರ್ (26, ರೆ. ರಘುನಾಥ್ ಪೇಠ್, ಅಂಗೋಳ, ಬೆಳಗಾವಿ).

ಕಳೆದ ತಿಂಗಳು ರಾಮಲಿಂಗ್ ಖಿಂದ ಗಲ್ಲಿಯಲ್ಲಿ ಕಳ್ಳತನ ನಡೆದಿತ್ತು. ಬೀಗ ಹಾಕಿದ್ದ ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಹಗಲು ಹೊತ್ತಿನಲ್ಲಿ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ. ಗಣೇಶಪುರ ಮತ್ತು ಭವಾನಿ ನಗರ ಪ್ರದೇಶದಲ್ಲಿ ಜುಲೈ ತಿಂಗಳಲ್ಲಿ ಕ್ಯಾಂಪ್ ಮತ್ತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಕಳ್ಳತನದ ದೂರು ದಾಖಲಾಗಿದೆ. ಈ ಪ್ರಕರಣಗಳ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡರು. ಶಂಕೆಯ ಮೇರೆಗೆ ಶಿಂಧೆ ಮತ್ತು ಮುತ್ಗೇಕರ್ ಅವರನ್ನು ಬಂಧಿಸಲಾಗಿತ್ತು. ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ಬೆಳಗಾವಿ ನಗರದ ಮೇಲ್ಕಂಡ 3 ಕಡೆಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವರಿಂದ 5 ಲಕ್ಷದ 54 ಸಾವಿರ ಮೌಲ್ಯದ 77 ಗ್ರಾಂ ಚಿನ್ನಾಭರಣ, 20 ಸಾವಿರ ಮೌಲ್ಯದ 20 ತೊಲ ಬೆಳ್ಳಿ ಆಭರಣ, 20 ಸಾವಿರ ಮೌಲ್ಯದ 1 ಲ್ಯಾಪ್ ಟಾಪ್, 10 ಸಾವಿರ ನಗದು ಸೇರಿದಂತೆ 6 ಲಕ್ಷ 7 ಸಾವಿರದ 400 ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೇ 3 ಸಾವಿರ ರೂಪಾಯಿ ಮೌಲ್ಯದ 1 ಮೊಬೈಲ್ ಸೆಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಖಡೇಬಜಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ದಿಲೀಪ್ ನಿಂಬಾಳ್ಕರ್ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಮಧ್ಯೆ ರಾಮಲಿಂಗ್ ಖಿಂದ ಗಲ್ಲಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಖಡೇಬಜಾರ್ ಪೊಲೀಸರು ಕ್ರಮ ಕೈಗೊಂಡು ಇಬ್ಬರನ್ನು ಬಂಧಿಸಿದ್ದಾರೆ. ಅವರನ್ನು ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ. ಉಳಿದ ಎರಡು ಪ್ರಕರಣಗಳಲ್ಲಿ ಬಾಡಿ ವಾರೆಂಟ್ ಸಹಿತ ಕ್ಯಾಂಪ್ ಹಾಗೂ ಟಿಳಕವಾಡಿ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು