ಬೆಳಗಾವಿ : ಟಿಳಕವಾಡಿಯ ಮೊದಲ ರೈಲ್ವೆ ಗೇಟ್ ಪ್ರದೇಶ ಮೃತ್ಯುಕೂಪವಾಗಿ ಮಾರ್ಪಟ್ಟಿದೆ. ರೈಲು ಆಗಮನ ಮತ್ತು ನಿರ್ಗಮನದ ನಂತರ ಉಂಟಾಗುವ ಸಂಚಾರ ದಟ್ಟಣೆಯಿಂದಾಗಿ ಈ ಸ್ಥಳದಲ್ಲಿ ಸಮಸ್ಯೆಗಳು ಉಂಟಾಗುತ್ತಿವೆ. ಇದೇ ರೀತಿಯ ಘಟನೆ ಬುಧವಾರ ಸಂಜೆ ನಡೆದಿದೆ. ಈ ಘಟನೆಯಲ್ಲಿ ಓರ್ವ ಸೈಕ್ಲಿಸ್ಟ್ ಸವಾರ ಸಾವನ್ನಪ್ಪಿದ್ದಾನೆ. ರೈಲ್ವೇ ಗೇಟ್ ದಾಟುತ್ತಿದ್ದ ಸೈಕ್ಲಿಸ್ಟ್ ಟ್ರಕ್ ಅಡಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಸಂಜೆ 7:00 ಗಂಟೆ ಸುಮಾರಿಗೆ ನಡೆದಿದೆ.
ಈ ಘಟನೆಯಿಂದ ಟಿಳಕವಾಡಿ ಭಾಗದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ಟಿಳಕವಾಡಿ ಸಂಚಾರ ದಟ್ಟಣೆ ನಿವಾರಣೆಗೆ ಕ್ರಮಕೈಗೊಳ್ಳಬೇಕು ಎಂಬ ಆಗ್ರಹವೂ ಇದೆ.
0 ಕಾಮೆಂಟ್‌ಗಳು