ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ (ಮಾಜಿ ಸಂಸದ) ರಮೇಶ ಕತ್ತಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಭೆಗೆ ಗೈರು ಹಾಜರಾದ ರಮೇಶ ಕತ್ತಿ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕರಿಗೆ ರಾಜೀನಾಮೆ ಸಲ್ಲಿಸಿದರು. 17ರಲ್ಲಿ 14-15 ನಿರ್ದೇಶಕರು ಬಂಡಾಯವೆದ್ದು ಅಧ್ಯಕ್ಷ ರಮೇಶ ಕತ್ತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಅವಿಶ್ವಾಸ ನಿರ್ಣಯದ ಸೂಕ್ಷ್ಮತೆಯನ್ನು ಅರಿತು ರಮೇಶ್ ಕತ್ತಿ ರಾಜೀನಾಮೆ ಸಲ್ಲಿಸಿದ್ದಾರೆ.
0 ಕಾಮೆಂಟ್‌ಗಳು