ಖಾನಾಪುರ: ಖಾನಾಪುರ ತಾಲೂಕಿನ ಮುಂಡವಾಡ ಗವಳಿವಾಡದ ರೈತ ವಿನೋದ ಜಾಧವ (ವಯಸ್ಸು 46) ಬೆಳಗ್ಗೆ ಜಮೀನಿಗೆ ಹೋಗುತ್ತಿದ್ದಾಗ ಎರಡು ಕರಡಿಗಳು ಏಕಾಏಕಿ ದಾಳಿ ನಡೆಸಿವೆ.
ಈ ಕುರಿತು ಮಾಹಿತಿ ಏನೆಂದರೆ ಇಂದು ಬೆಳಗ್ಗೆ ರೈತ ತನ್ನ ಜಮೀನಿಗೆ ಹೋಗುತ್ತಿದ್ದಾಗ ಎರಡು ಕರಡಿಗಳು ಏಕಾಏಕಿ ದಾಳಿ ನಡೆಸಿವೆ. ದಾಳಿ ಮಾಡಿದ ಕೂಡಲೇ ಪ್ರತಿರೋಧ ವ್ಯಕ್ತಪಡಿಸಿ ಕರಡಿಯಿಂದ ಮುಕ್ತಿ ಪಡೆದರು. ಗ್ರಾಮಸ್ಥರು ಮಾಹಿತಿ ಪಡೆದ ಕೂಡಲೇ ಗ್ರಾಮಸ್ಥರು ರವಿ ಪಾಟೀಲ, ಶಾಸಕ ವಿಠ್ಠಲರಾವ್ ಹಲಗೇಕರ ಸಹಾಯಕರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ರವಿ ಪಾಟೀಲ್ ಆ್ಯಂಬುಲೆನ್ಸ್ ಗೆ ಕರೆ ಮಾಡಿ ಆಂಬುಲೆನ್ಸ್ ನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಬಳಿಕ ಗ್ರಾಮಸ್ಥರು ಆ್ಯಂಬುಲೆನ್ಸ್‌ನಲ್ಲಿ ರೈತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ಖಾನಾಪುರ ತಾಲೂಕು ಶಾಸಕ ವಿಠ್ಠಲರಾವ್ ಹಲಗೇಕರ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಹಾಗೂ ಸಂಬಂಧಪಟ್ಟ ರೈತನಿಗೆ ಪರಿಹಾರ ದೊರಕಿಸಿಕೊಡಲು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
0 ಕಾಮೆಂಟ್‌ಗಳು