Hot Posts

6/recent/ticker-posts

ಬೆಳಗಾವಿ: ಗಣಪತಿ ಮೆರವಣಿಗೆ ವೇಳೆ ಕಾರ್ಯಕರ್ತರ ನಡುವೆ ಘರ್ಷಣೆ.

ಬೆಳಗಾವಿ: ಪಟಾಕಿ ವಿಚಾರವಾಗಿ ಎರಡು ಮಂಡಳ ಕಾರ್ಯಕರ್ತರ ನಡುವೆ ಗಣಪತಿ ಮೆರವಣಿಗೆ ನಡೆಯುತ್ತಿದ್ದ ಸಂದರ್ಭ ಕರೋಶಿ(ಟಿ.ಚಿಕೋಡಿ)ಯಲ್ಲಿ ನಡೆದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಏನೆಂದರೆ ಕರೋಶಿ ಎಂಬಲ್ಲಿ ಇದೇ ವೇಳೆ ಮಂಡಲದ ಗಣೇಶ ಮೂರ್ತಿಗಳು ಟ್ರ್ಯಾಕ್ಟರ್ ನಲ್ಲಿ ಮೆರವಣಿಗೆ ಸಾಗುತ್ತಿತ್ತು.
ಪಟಾಕಿ ಸಿಡಿಸುತ್ತಿದ್ದ ವೇಳೆ ಟ್ರ್ಯಾಕ್ಟರ್ ಮೇಲೆ ಕಿಡಿ ಬಿದ್ದಿದ್ದರಿಂದ ಪ್ರಶ್ನೆ ಕೇಳಲು ಹೋದ ಕಾರ್ಯಕರ್ತರೊಂದಿಗೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಗ್ರಾಮದ ಹಿರಿಯರು ವಿವಾದ ಬಗೆಹರಿಸಿದ ಬಳಿಕ ಮೆರವಣಿಗೆ ಸಾಗಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು