Hot Posts

6/recent/ticker-posts

ಶಿವಲಿಂಗದ ಮೇಲೆ ಕಾಲಿಟ್ಟು ಸ್ವಾಮೀಜಿ ಪಾದಪೂಜೆ: ಭಕ್ತರ ಆಕ್ರೋಶ.

 

ಚಿತ್ತಾಪುರ: ಸೇಡಂ ತಾಲೂಕಿನ ಕಲಕಂಬ ಗ್ರಾಮದಲ್ಲಿರುವ ದಿಗ್ಗಾಂವ ಶಾಖಾ ಮಠದ ಈಶ ಬಸವೇಶ್ವರ ದೇವಾಲಯದಲ್ಲಿ ಪ್ರಾಣ ಪ್ರತಿಷ್ಠಾಪನೆಗಾಗಿ ಸಿದ್ಧಗೊಂಡಿದ್ದ ಶಿವಲಿಂಗದ ಮೇಲೆ ತಾಲೂಕಿನ ದಿಗ್ಗಾಂವ ಗ್ರಾಮದ ಪಂಚಗೃಹ ಹಿರೇಮಠದ ಪೀಠಾಧಿಪತಿ ಸಿದ್ಧವೀರ ಶಿವಾಚಾರ್ಯ ಶ್ರೀಗಳು ತಮ್ಮ ಪಾದಗಳನ್ನು ಇರಿಸಿ ಪಾದಪೂಜೆ ಮಾಡಿಸಿಕೊಂಡಿದ್ದಾರೆ ಎನ್ನಲಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶಿವಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೊಡ್ಡದಾದ ಪಾತ್ರೆಯಲ್ಲಿ ಕಪ್ಪು ಬಣ್ಣದ ಶಿವಲಿಂಗವನ್ನು ಇರಿಸಿ ಕುರ್ಚಿ ಮೇಲೆ ಕುಳಿತಿರುವ ಸ್ವಾಮೀಜಿ ತಮ್ಮ ಎರಡೂ ಪಾದಗಳನ್ನು ಲಿಂಗದ ಮೇಲೆ ಇಟ್ಟು ಭಕ್ತರು ಹಾಲಿನಿಂದ ಪಾದಗಳನ್ನು ತೊಳೆದು, ಕಾಲಿಗೆ ಕುಂಕುಮ ಹಚ್ಚಿ, ಬಿಲ್ವಪತ್ರೆ, ಹೂಗಳನ್ನು ಇರಿಸಿ ಪೂಜೆ ಮಾಡುತ್ತಿರುವ ದೃಶ್ಯಗಳು ವೀಡಿಯೋದಲ್ಲಿವೆ. ಸ್ವಾಮೀಜಿಯ ನಡೆಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು