ಬೆಳಗಾವಿ: ಅಕ್ಟೋಬರ್ 21ರಿಂದ ವಾರಾಂತ್ಯದಲ್ಲಿಯೂ ಉಪ ನೋಂದಣಾಧಿಕಾರಿಗಳ ಕಚೇರಿ ಕಾರ್ಯನಿರ್ವಹಿಸಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಮ ವರ್ಗದ ಕಾರ್ಮಿಕರು ಕೆಲಸ ಬಿಟ್ಟು ವಾರದ ದಿನಗಳಲ್ಲಿ ಉಪನೋಂದಣಿ ಕಚೇರಿಗೆ ಬರಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಹೊರ ರಾಜ್ಯಗಳಿಂದ ನೋಂದಣಿಗೆ ಬರುವವರಿಗೂ ತೊಂದರೆಯಾಗುತ್ತಿದೆ. ಆದ್ದರಿಂದ ಎಲ್ಲರ ಅನುಕೂಲಕ್ಕಾಗಿ ಎರಡು ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರದಂದು ಈ ಕಚೇರಿಗಳನ್ನು ತೆರೆಯಲು ನಿರ್ಧರಿಸಲಾಗಿದೆ.
ಅಕ್ಟೋಬರ್ 21 ರ ನಂತರ, ಪ್ರತಿ ನೋಂದಣಿ ಜಿಲ್ಲೆಯಲ್ಲಿ ಒಂದು ಸಬ್-ರಿಜಿಸ್ಟ್ರಾರ್ ಕಚೇರಿ ಶನಿವಾರ, ಭಾನುವಾರ ಮತ್ತು ರಜಾದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ. ರಜಾದಿನಗಳಲ್ಲಿ ಯಾವ ನೋಂದಣಿ ಕಚೇರಿಗಳು ತೆರೆದಿರುತ್ತವೆ ಎಂಬ ಪಟ್ಟಿಯನ್ನು ಅವಧಿಗೆ ಮುಂಚಿತವಾಗಿ ಪ್ರಕಟಿಸಲಾಗುತ್ತದೆ. ನಾಗರಿಕರು ನೋಂದಣಿಗೆ ಅರ್ಜಿ ಸಲ್ಲಿಸಿದಾಗ, ಯಾವ ಕಚೇರಿ ತೆರೆದಿದೆ ಎಂಬ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನೀಡಲಾಗುತ್ತದೆ.
0 ಕಾಮೆಂಟ್‌ಗಳು