Hot Posts

6/recent/ticker-posts

ಬೆಳಗಾವಿ ನಗರ: ಎರಡೂ ಗುಂಪುಗಳ ನಡುವೆ ಕತ್ತಿಯಿಂದ ಘರ್ಷಣೆ.

 

ಬೆಳಗಾವಿ: ಗಣೇಶೋತ್ಸವದ ಮೆರವಣಿಗೆ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ಮುತುವರ್ಜಿ ವಹಿಸಿ ಸೆ.16ರ ಬದಲು ಸೆ.22ರಂದು ಈದ್ ಮಿಲಾದ್ ಮೆರವಣಿಗೆ ನಡೆಸಲು ತೀರ್ಮಾನಿಸಲಾಯಿತು. ಈ ನಿರ್ಧಾರದಂತೆ ಸೆ.22ರ ಭಾನುವಾರ ಬೆಳಗಾವಿಯಲ್ಲಿ ಈದ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಮೆರವಣಿಗೆ ಬಳಿಕ ರುಕ್ಮಿಣಿನಗರ ಹಾಗೂ ಉಜ್ವಲನಗರದ ಕೆಲ ಯುವಕರು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದು, ಮಾರಾಮಾರಿ ನಡೆದಿದೆ. ಮೆರವಣಿಗೆ ಸಾಗುತ್ತಿದ್ದಾಗ ಕೆಲ ಯುವಕರ ನಡುವೆ ಸಣ್ಣಪುಟ್ಟ ಕಾರಣಕ್ಕೆ ವಾಗ್ವಾದ ನಡೆದಿದೆ. ಆದರೆ ಮೆರವಣಿಗೆ ಮುಗಿಸಿ ಹಿಂತಿರುಗುವಾಗ ಎರಡೂ ಗುಂಪಿನವರು ಕತ್ತಿಯಿಂದ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಉಜ್ವಲನಗರದ 4 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳ ಹೆಸರು ಮಹಮ್ಮದ್ ಕೈಫ್, ಸಾಹಿಲ್ ಬಂಡಾರೆ, ತನ್ವೀರ್, ಅಹಮದ್.

ಸದ್ಯ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು