ಬೆಳಗಾವಿ: ಗೋಕಾಕ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ ನಲ್ಲಿ ನಡೆದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಆರೋಪಿಗಳ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾ ಶಂಕರ ಗುಳೇದ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮಹಾಲಕ್ಷ್ಮಿ ಬ್ಯಾಂಕ್ ಅಧ್ಯಕ್ಷ ಜೀತೇಂದ್ರ ಎರಡು ದಿನಗಳ ಹಿಂದೆ ದೂರು ನೀಡಿದ್ದರು. ಬ್ಯಾಂಕ್ ನೌಕರರು ಸೇರಿ 14 ಆರೋಪಿಗಳು ಸಾಲ ಪಡೆದು ಹಣ ಹಿಂತಿರುಗಿಸದೆ ವಂಚನೆ ಮಾಡಿದ್ದಾರೆ. ಸಾಲ ಮರುಪಾವತಿ ಮಾಡದೆ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಗೊತ್ತಾಗಿದ್ದು, ಏಪ್ರಿಲ್ ನಲ್ಲಿ ಈ ಪ್ರಕರಣ ಬಯಲಾಗಿದೆ. ಈ ವೇಳೆ ಸಾಗರ್ ಎಂಬ ವ್ಯಕ್ತಿ ಹೆಚ್ಚಿನ ವಂಚನೆ ಮಾಡಿದ್ದಾನೆ. 6 ಕೋಟಿ 97 ಲಕ್ಷ ಸ್ಥಿರ ಠೇವಣಿ, ಬೇರೆಯವರ ಹೆಸರಿನಲ್ಲಿ ಸಾಲ ಪಡೆದು ಆ ಸಾಲ ಮರುಪಾವತಿ ಮಾಡದೇ ಇರುವುದು ಕಂಡು ಬಂದಿದ್ದು, ನಾಲ್ಕು ಬಾರಿ ಬ್ಯಾಂಕಿನ ವಹಿವಾಟು ಪರಿಶೀಲನೆ ನಡೆಸಲಾಗಿದೆ. ಆದರೆ ಒಮ್ಮೆಯೂ ಈ ವಂಚನೆಯ ಅಂಶ ಪತ್ತೆಯಾಗಿರಲಿಲ್ಲ. ಈ ವೇಳೆ ಬ್ಯಾಂಕ್ ಅಧಿಕಾರಿಗಳು ಸೇರಿ 112 ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಇದರ ಸರ್ಕಾರಿ ವೆಚ್ಚ 13.17 ಕೋಟಿ. ಮಾರುಕಟ್ಟೆ ಮೌಲ್ಯ 50 ಕೋಟಿ ರೂಪಾಯಿ ಎಂದು ಡಾ. ಭೀಮಾಶಂಕರ ಗುಳೇದ್ ನೀಡಿದರು.
0 ಕಾಮೆಂಟ್‌ಗಳು