ಬೆಳಗಾವಿ: ಯುವಕನೊಬ್ಬನನ್ನು ಕೊಂದು ಶವವನ್ನು ಬಸ್ ನಿಲ್ದಾಣಕ್ಕೆ ಎಸೆದಿರುವ ಘಟನೆ ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ನಡೆದಿದೆ. ಅನಂತಪುರ ಗ್ರಾಮ ವ್ಯಾಪ್ತಿಯ ಚನ್ನಮ್ಮ ವೃತ್ತದ ಬಸ್ ನಿಲ್ದಾಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಪಕ್ಕದ ಮಾದಬಾವಿ ಗ್ರಾಮದ ಅಪ್ಪಾಸಾಬ್ ಸಿದ್ದಪ್ಪ ಕಾಂಬಳೆ (ವಯಸ್ಸು 37) ಸೋಮವಾರ ಕೆಲಸದ ನಿಮಿತ್ತ ಮಹಾರಾಷ್ಟ್ರಕ್ಕೆ ತೆರಳಿದ್ದರು.
ಸೋಮವಾರ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಮನೆಗೆ ಪತ್ನಿಗೆ ಕರೆ ಮಾಡಿ ಮಷಿನ್ ರಿಪೇರಿ ಮಾಡುತ್ತಿರುವುದರಿಂದ ಮನೆಗೆ ಬರಲು ಸಾಧ್ಯವಾಗುತ್ತಿಲ್ಲ. ಆದರೆ, ಮಂಗಳವಾರ ಬೆಳಗ್ಗೆ ಅಪ್ಪಾಸಾಬ್ ಪತಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
0 ಕಾಮೆಂಟ್‌ಗಳು