ಬೆಳಗಾವಿ: ಬೈಲಹೊಂಗಲ: ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಮಹಾದೇವಿ ಗುರಪ್ಪ ತೊಲಗಿ (70) ಎಂದು ಗುರುತಿಸಲಾಗಿದೆ. ಈಕೆಯ ಮಗ ಈರಣ್ಣ ಗುರಪ್ಪ ತೊಲಗಿ (ವಯಸ್ಸು 34) ಕುಡಿದ ಅಮಲಿನಲ್ಲಿ ತಾಯಿಯನ್ನು ಕೊಂದಿದ್ದಾನೆ.
ಕೃಷಿ ಹಾಗೂ ಹಣದ ಆಸೆಗಾಗಿ ತಾಯಿಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಕುಡಿದ ಅಮಲಿನಲ್ಲಿ ತಾಯಿ ಮಹಾದೇವಿಯನ್ನು ದೊಣ್ಣೆಯಿಂದ ಇರಿದು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಡಿವೈಎಸ್ಪಿ ರವಿನಾಯಕ್, ಪಿಎಸ್ಐ ನಂದೀಶ್, ಪ್ರವೀಣ್ ಕೋಟಿ ಭೇಟಿ ನೀಡಿ ಆರೋಪಿಗಳನ್ನು ಬಂಧಿಸಿದ್ದಾರೆ. ದೊಡವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
0 ಕಾಮೆಂಟ್‌ಗಳು