Hot Posts

6/recent/ticker-posts

ಬೆಳಗಾವಿ: ಈ ಗ್ರಾಮಕ್ಕೆ ಹುಲಿ ಬಂದಿದೆ ಎಂಬ ವದಂತಿ ಹಬ್ಬಿದೆ.

 

ಬೆಳಗಾವಿ: ಬೆಳಗಾವಿ ತಾಲೂಕಿನ ಕೊಂಡಸ್ಕೊಪ್ಪ ಗ್ರಾಮದ ಬಳಿ ಹುಲಿ ಇದೆ ಎಂಬ ಸುಳ್ಳು ವದಂತಿ ಹಬ್ಬಿದ್ದು, ಹುಲಿ ಓಡಿ ಹೋಗಿರುವ ವಿಡಿಯೋ ವೈರಲ್ ಆಗಿದೆ. ಇದಾದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ, ಹುಲಿಯ ಚಲನವಲನದ ಕುರುಹು ಪತ್ತೆಯಾಗಿಲ್ಲ.

ಈ ಕುರಿತು ಮಾತನಾಡಿದ ಬೆಳಗಾವಿಯ ಎಸಿಎಫ್ ನಾಗರಾಜ್, ಹುಲಿ ಬಂದಿದೆ ಅಂತ ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಮೈಮೇಲಿನ ಭಾಗ ಹುಲಿಯದ್ದು ಹಾಗೂ ಕಾಲುಗಳು ಚಿರತೆಯದ್ದಾಗಿದೆ. ಅದನ್ನು ಎಡಿಟ್ ಮಾಡಿ ವೈರಲ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅಕ್ಕಪಕ್ಕದ ಗ್ರಾಮಸ್ಥರು ಆತಂಕ ಪಡಬಾರದು. ನಿನ್ನೆ ಕಾಡು ಬೆಕ್ಕು ಕಾಣಿಸಿಕೊಂಡಿದ್ದು, ಅದನ್ನು ಹಿಡಿದು ಕಾಡಿಗೆ ಬಿಡಲಾಗಿದೆ ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು