ಬೆಳಗಾವಿ: ಖಾನಾಪುರ ತಾಲೂಕಿನ ದೇವರಾಯನಲ್ಲಿ ಸೋಮವಾರ ಸಂಜೆ ದನ ಮೇಯಿಸಿ ಮನೆಗೆ ಮರಳುತ್ತಿದ್ದ ವೃದ್ಧನ ಮೇಲೆ ಕರಡಿ ದಾಳಿ ನಡೆಸಿದ್ದು, ರೈತ ಗಂಭೀರವಾಗಿ ಗಾಯಗೊಂಡಿದ್ದಾರೆ. ವೃದ್ಧನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇರಾಯಿಯ ರೈತ ನಾರಾಯಣ ಚೌರಿ (ವಯಸ್ಸು 65) ದನ ಮೇಯಿಸಲು ಹೋಗಿದ್ದರು.
ಸಂಜೆ ಹಿಂತಿರುಗುತ್ತಿದ್ದ ವೇಳೆ ಏಕಾಏಕಿ ಕರಡಿ ದಾಳಿ ನಡೆಸಿದೆ. ಜೋರಾಗಿ ಕೂಗುತ್ತಿದ್ದಂತೆ ಕೆಲವರು ಓಡಿ ಬಂದು ಕರಡಿಯನ್ನು ಓಡಿಸಿದರು. ಅವರನ್ನು ನಂದಗಢದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು.
ಖಾನಾಪುರ ಅರಣ್ಯಾಧಿಕಾರಿ ಸುನೀತಾ ನಿಂಬರಗಿ ಹಾಗೂ ಆರ್‌ಎಫ್‌ಒ ಬಾಳೆಹೊಸೂರು ನಂದಗಢದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಚೌರಿಯನ್ನು ಬೆಳಗಾವಿಗೆ ಕಳುಹಿಸಿದ್ದಾರೆ. ಕರಡಿ ರೈತನ ಬೆನ್ನು ಮತ್ತು ತಲೆಯ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ.
0 ಕಾಮೆಂಟ್‌ಗಳು