ಬೆಳಗಾವಿ : ಸೌಂದತ್ತಿ : ಉಗರಗೋಳ ಸಮೀಪದ ಹಿರೇಕುಂಬಿ ಬಳಿ ಶುಕ್ರವಾರ ಸಂಜೆ ದ್ವಿಚಕ್ರ ವಾಹನ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಹೆಸರು ಬಸವರಾಜ ಪ್ರಭುನ್ನವರ (ವಯಸ್ಸು 48, ಸೌಂದತ್ತಿ ನಿವಾಸಿ), ಯಲ್ಲಪ್ಪ ಕೊರವಿನಕೊಪ್ಪ (46, ಹಂಚಿನಾಳ್ ನಿವಾಸಿ).
ಈ ಅಪಘಾತದಲ್ಲಿ ಗಾಯಗೊಂಡ ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಮದುರ್ಗದ ಡಿವೈಎಸ್ಪಿ ಹಾಗೂ ಸೌಂದತ್ತಿಯ ಸಿಪಿಐ ಡಿ. ಎಸ್. ಧರ್ಮಟ್ಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದ ಕುರಿತು ಸೌಂದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 ಕಾಮೆಂಟ್‌ಗಳು