ರಾಣಿ ಚನ್ನಮ್ಮ ಸ್ವಾತಂತ್ರ್ಯ ಹೋರಾಟದ ಮೊದಲ ಭಾರತೀಯ ಮಹಿಳೆ. ಬಂಗಾರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಸ್ವಾತಂತ್ರ್ಯ ಹೋರಾಟಕ್ಕೆ ರಾಣಿ ಚನ್ನಮ್ಮನ ಕೊಡುಗೆಯನ್ನು ಮರೆಯಬಾರದು ಎಂಬ ಆಲೋಚನೆಯೊಂದಿಗೆ ಕಿತ್ತೂರು ಉತ್ಸವವನ್ನು ಪ್ರಾರಂಭಿಸಲಾಯಿತು. ಮೊದಮೊದಲು ಗ್ರಾಮಕ್ಕೆ ಸೀಮಿತವಾಗಿದ್ದ ಈ ಹಬ್ಬವನ್ನು ಈಗ ತಾಲೂಕು, ಜಿಲ್ಲಾ ಮಟ್ಟದಲ್ಲಿ ಆಚರಿಸಿ ರಾಜ್ಯಮಟ್ಟದಲ್ಲಿ ಆಚರಿಸಲಾಗುತ್ತಿದೆ. ಇದು ರಾಜ್ಯದ ಜನತೆಗೆ ಹೆಮ್ಮೆಯ ವಿಚಾರ.
2007ರಲ್ಲಿ ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಸಂಸತ್ತಿನ ಆವರಣದಲ್ಲಿ ರಾಣಿ ಚನ್ನಮ್ಮನ ಪ್ರತಿಮೆಯನ್ನು ಅನಾವರಣಗೊಳಿಸಿ ದೇಶಭಕ್ತಿ ಮೂಡಿಸಿದ್ದರು. ಚನ್ನಮ್ಮನ ಕಾರ್ಯ ಸದಾ ನೆನಪಿನಲ್ಲಿ ಉಳಿಯುವಂತೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮ ಹೆಸರಿಡುವುದು ಸೂಕ್ತ ಎಂದು ಸಂಸತ್ತಿನಲ್ಲಿ ಕಡಾಡಿ ಹೇಳಿದರು.
0 ಕಾಮೆಂಟ್‌ಗಳು