Hot Posts

6/recent/ticker-posts

ಬೆಳಗಾವಿ : ಚಿಕ್ಕೋಡಿ ಜಿಲ್ಲೆಯ ಪ್ರಶ್ನೆ: ಪ್ರತ್ಯೇಕ ಜಿಲ್ಲೆಗೆ ಶಾಸಕರು ಆಗ್ರಹ.

 
ಬೆಳಗಾವಿ : ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯಾಗಬೇಕು. ಅದಕ್ಕಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ, ಸರಕಾರ ಆದಷ್ಟು ಬೇಗ ಪ್ರತ್ಯೇಕ ಜಿಲ್ಲೆ ಘೋಷಣೆ ಮಾಡಬೇಕು ಎಂದು ಶಾಸಕ ಗಣೇಶ ಹುಕ್ಕೇರಿ ಶುಕ್ರವಾರ ವಿಧಾನ ಸಭೆಯಲ್ಲಿ ಆಗ್ರಹಿಸಿದರು.

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಗಣೇಶ ಹುಕ್ಕೇರಿ ಚಿಕ್ಕೋಡಿ ಜಿಲ್ಲೆಯ ಸಮಸ್ಯೆ ಕುರಿತು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದರು. ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಬೆಳಗಾವಿ ಜಿಲ್ಲಾ ಕೇಂದ್ರದಿಂದ ಗಡಿಭಾಗದ ಕೊನೆಯ ಗ್ರಾಮಕ್ಕೆ 200 ಕಿ.ಮೀ. ಗಿಂತ ಹೆಚ್ಚಾಗಿರುತ್ತದೆ ಅಥಣಿ ತಾಲೂಕಿನ ಗಡಿ ಭಾಗದ ಜನರು ಸರಕಾರಿ ಕೆಲಸದ ನಿಮಿತ್ತ ಬೆಳಗಾವಿಗೆ ಬರಲು ತುಂಬ ದಿನ ಬೇಕಾಗುತ್ತದೆ. ಹಲವು ಬಾರಿ ಅಧಿಕಾರಿಗಳು ಭೇಟಿ ನೀಡದ ಕಾರಣ ಸಮಯ, ಹಣವೂ ವ್ಯರ್ಥವಾಗುತ್ತಿದೆ.

ಜಿಲ್ಲಾಸ್ಪತ್ರೆ ದೂರದಲ್ಲಿರುವುದರಿಂದ ಅಥಣಿ, ಕಾಗವಾಡ, ಕುಡಚಿ, ರಾಯಬಾಗ, ನಿಪಾಣಿ ತಾಲೂಕಿನ ಬಹುತೇಕ ಜನರು ನೆರೆಯ ಮಹಾರಾಷ್ಟ್ರದ ಆಸ್ಪತ್ರೆಗಳಿಂದ ಆಸರೆ ಪಡೆಯುತ್ತಿದ್ದಾರೆ. ದ್ರಾಕ್ಷಿ, ದಾಳಿಂಬೆ, ಜೋಳ ಮೊದಲಾದ ಬೆಳೆಗಳ ಉತ್ಪಾದನೆ ಮಹಾರಾಷ್ಟ್ರದ ಮಾರುಕಟ್ಟೆಗೆ ಹೋಗುತ್ತಿರುವುದರಿಂದ ರಾಜ್ಯ ಸರ್ಕಾರದ ಆದಾಯಕ್ಕೆ ನಷ್ಟವಾಗುತ್ತಿದೆ. ಅಧಿಕಾರ ವಿಕೇಂದ್ರೀಕರಣವಾದರೆ ಅಭಿವೃದ್ಧಿ ಸಾಧ್ಯ. ಅದಕ್ಕಾಗಿ ಬೆಳಗಾವಿ ಜಿಲ್ಲೆ ವಿಭಜನೆಯಿಂದ ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ. ಆದ್ದರಿಂದ ಚಿಕ್ಕೋಡಿ ಜಿಲ್ಲೆ ಈ ಭಾಗದ ಅಭಿವೃದ್ಧಿಗೆ ಸಹಕರಿಸಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು