Hot Posts

6/recent/ticker-posts

ಬೆಳಗಾವಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಲಾಗಿದೆ.

WhatsApp Group Join Now
ಖಾನಾಪುರ : ಖಾನಾಪುರ ತಾಲೂಕಿನ ಭೀಮಗಡ ಅಭಯಾರಣ್ಯ ಸಮೀಪದ ಗ್ರಾಮದ ಅಪ್ರಾಪ್ತ ಬಾಲಕಿಯ ಮೇಲೆ 38ರ ಹರೆಯದ ದುಷ್ಕರ್ಮಿಯೊಬ್ಬ ಅತ್ಯಾಚಾರ ಎಸಗಿ ಕೊಲ್ಲಾಪುರಕ್ಕೆ ಪರಾರಿಯಾಗಿದ್ದಾನೆ ಎಂದು ಬಾಲಕಿಯ ಕುಟುಂಬ ಮಂಗಳವಾರ ದೂರು ದಾಖಲಿಸಿದೆ.

• ಈ ಸಂಬಂಧ ನೀಡಿದ ದೂರಿನ ಪ್ರಕಾರ, ಭೀಮಗಡ ಅಭಯಾರಣ್ಯದ ಪಾಸ್ಕೋಲಿ ಎಂಬಲ್ಲಿ ಗ್ರಾಮದ ಶಾಹು ಗಾವಡೆ ಎಂಬ ವ್ಯಕ್ತಿ ಕಳೆದ ಕೆಲ ದಿನಗಳ ಹಿಂದೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಶಾಹು ಗಾವಡೆ ವಿರುದ್ಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪೋಸ್ಕೋ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶಾಹು ಗಾವಡೆಯನ್ನು ಬಂಧಿಸಲು ಖಾನಾಪುರ ಪೊಲೀಸರ ತಂಡ ಕೊಲ್ಲಾಪುರಕ್ಕೆ ತೆರಳಿದ್ದು, ಖಾನಾಪುರ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ ಎಂಬ ವಿಶ್ವಾಸಾರ್ಹ ವರದಿ ಇದೆ. ಸಂತ್ರಸ್ತ ಬಾಲಕಿಗೆ ಖಾನಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ವೈದ್ಯಕೀಯ ಪರೀಕ್ಷೆಗಾಗಿ ಸಂತ್ರಸ್ತೆಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಯ ಪೋಸ್ಕೋ ಸೆಲ್‌ಗೆ ಕಳುಹಿಸಲಾಗಿದೆ. ವೈದ್ಯರಿಂದ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದ್ದು, ಡಿವೈಎಸ್ಪಿ ರವಿ ನಾಯ್ಕ, ಖಾನಾಪುರ ಠಾಣೆ ಇನ್ಸ್ ಪೆಕ್ಟರ್ ಮಂಜುನಾಥ ನಾಯ್ಕ ಮಾರ್ಗದರ್ಶನದಲ್ಲಿ ತನಿಖೆ ನಡೆಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು